Current Date 15 May, 2026

''ಅಬ್‌ ಕಿ ಬಾರ್‌ 400 ಪಾರ್‌'' ಎಂದು ನಗೆಪಾಟಲಿಗೀಡಾದ ಪೊರ್ಕಿ ಪ್ರಣೀತಾ...!

ಪ್ರಣೀತಾ ಸುಭಾಶ್ ಮತ್ತು ಕಂಗನಾ ರಣಾವತ್ ನಡುವೆ ಹೆಚ್ಚೇನು ವ್ಯತ್ಯಾಸ ಇಲ್ಲ. ಯಾಕೆಂದರೆ ಇಬ್ಬರು ಸನಾತನ ಧರ್ಮದ ಅನುಯಾಯಿ. ಇನ್ನೂ.. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಈ ಇಬ್ಬರಿಗೂ ಇರುವ ಅಭಿಮಾನ ಅಷ್ಟಿಷ್ಟಲ್ಲ.

ತಮ್ಮ ಈ ಶ್ರದ್ಧೆ ಮತ್ತು ಭಕ್ತಿಯ ಕಾರಣಕ್ಕೆ ಕಂಗನಾ ರಣಾವತ್ ಅವರಂತೆಯೇ ಅನೇಕ ಬಾರಿ ಪ್ರಣೀತಾ ಅನೇಕರ ಕಣ್ಣು ಕೆಂಪಾಗಿಸಿದ್ದು ಇದೆ. ಟ್ರೋಲ್ ಆಗಿದ್ದು ಇದೆ. ಆದರೂ ಕೂಡ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸವನ್ನ ನಿಷ್ಠೆಯಿಂದ ಮಾಡ್ತಾನೇ ಬಂದ ಪ್ರಣೀತಾ ಈಗ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದ್ದಾರೆ.